ಭಾರತ ಸರ್ಕಾರ ಸಂವಿಧಾನದ ೩೭೧ (ಜೆ) ಕಲಂ ತಿದ್ದುಪಡಿ ತಂದು ಈ ಭಾಗದ ಜನರಿಗೆ ಮೀಸಲಾತಿ ನೀಡಿದೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹೃದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅಡಿಯಲ್ಲಿ ಕಾನೂನು ರಚಿಸಿ ಜಾರಿಗೆ ತಂದಿರುವುದು ಹಿಂದುಳಿದ ಈ ಪ್ರದೇಶದ ಸಾವಿರಾರು ಅವಕಾಶ ವಂಚಿತರ ಮನೋಬಲವನ್ನು ಹೆಚ್ಚಿಸಿದೆ. ಕರ್ನಾಟಕ ರಾಜ್ಯದಲ್ಲಿ ೧೯೫೬ರಂದಲೂ ಮಲತಾಯಿ ಮಕ್ಕಳಂತೆ ಬದುಕಿದ್ದ ಹೈದ್ರಾಬಾದ ಕರ್ನಾಟಕದ ಜನತೆಗೆ ಈ ೩೭೧ಕಲಂ ತಿದ್ದುಪಡಿ ಒಂದು ಊರುಗೋಲು ಆಗಿತ್ತು. ಆದರೆ ರಾಜ್ಯ ಸರ್ಕಾರ ಆ ಊರುಗೋಲನ್ನು ಕಿತ್ತುಕೊಳ್ಳಲು ಹೊರಟಿದ್ದು ಆಶ್ಚರ್ಯವಾಗಿದೆ ಎಂದು ಹೈ.ಕ.ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ||ರಜಾಕ್ ಉಸ್ತಾದ್ ಹಾಗೂ ಪ್ರಧಾನಕಾರ್ಯದರ್ಶಿ ಈ.ಧನರಾಜ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕಲಂ ಅಡಿಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಹೈದ್ರಾಬಾದ ಕರ್ನಾಟಕದ ಜನತೆಗೆ ದೊರಕುವಂತೆ ಆಳುವ ಸರ್ಕಾರಗಳು ಕಾಳಜಿವಹಿಸಿ ಮಾಡಬೇಕು. ಅದೇರೀತಿ ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತು ಪರಿಣಾಮಕಾರಿಯಾಗಿ ಅದನ್ನು ಜಾರಿಗೊಳಿಸುವ ಕೆಲಸ ಮಾಡಬೇಕಿದೆ. ಆದರೆ ಕಾನೂನು ರಚಿಸಿದ ಸರ್ಕಾರದ ಅಧಿಕಾರಿಗಳೆ ಅದನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿರುವುದು ನಮಗೆಲ್ಲ ದಿಗಭ್ರಮೆ ಮೂಡಿಸಿದೆ. ಈಗಾಗಲೆ ಕರ್ನಾಟಕ ರಾಜ್ಯ ಸರ್ಕಾರ ೨೦೧೩ರ ಫೆಬ್ರವರಿ ೨೩ರಂದು ಆದೇಶ ಹೊರಡಿಸಿ ಹೈ.ಕ.ದಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳನ್ನು ತಡೆಹಿಡಿದಿತ್ತು ಕಳೆದ ತಿಂಗಳಿ ಮತ್ತೊಂದು ಆದೇಶ ಮಾಡಿ ೦೧/೦೧/೨೦೧೩ರ ನಂತರ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳನ್ನು ವಾಪಾಸು ಪಡೆದು ಹೈ,ಕರ್ನಾಟಕಕ್ಕೆ ಮೀಸಲಾತಿ ನಿಗಧಿಗೊಳಿಸಭೇಕೆಂದು ಆದೇಶಿಸಿದೆ, ಆದರೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳ ನೆಮಕಾತಿ ಅಧಿಸೂಚನೆಯನ್ನು ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳ ಮೀಸಲಾತಿ ಹೊರತುಪಡಿಸಿ ನೀಡಲಾಗಿದ್ದು ಮತ್ತು ಕೆಲವೊಂದು ಇ;ಲಾಖೆಗಳಲ್ಲಿ ತರಾತುರಿಯಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿದೆ.
ಉದಾಹರಣೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು ೩೬ಮತ್ತು ೪೮ವಿವಿಧ ಹುದ್ದೆಗಳನ್ನು ಖಾಯಂ ಆಗಿ ನೆಮಕಾತಿ ಮಾಡಿಕೊಳ್ಳಲು ದಿನಾಂಕ೧೯/೦೩/೨೦೧೩ರಂದು ನೆಮಕಾತಿ ಆದೇಶವನ್ನು ನೀಡಿದೆ, ಕೆ.ಎಂ.ಎಫ್,ಬೆಂಗಳೂರು ೨೦೭ ಮತ್ತು ೦೪ ಖಾಯಂ ಹುದ್ದೆಗಳನ್ನು ನೇಮಕಾತಿಮಾಡಿಕೊಳ್ಳಲು ದಿನಾಂಕ೦೪ನವೆಂಬರ್ ಹಾಗೂ೧೬ನ ಸೆಪ್ಟೆಂಬರ್ ೨೦೧೩ರಂದು ನೇಮಖಾತಿ ಆದೇಶ ನೀಡಿದೆ, ಆರೋಗ್ಯ ಇಲಾಖೆ( ಏಡ್ಸ್ ನಿಯಂತ್ರಣ ಸಂಸ್ಥೆ)ಬೆಂಗಳೂರು ೧೮೪ ಗುತ್ತಿಗೆ ಆಧಾರಿತ ಹುದ್ದೆಗಳನ್ನು ನೇಮಕಾತಿಮಾಡಿಕೊಳ್ಳಲು ದಿನಾಂಕ೦೭/೧೦/೨೦೧೩ರಂದು ನೇಮಕಾತಿ ಆದೇಶವನ್ನು ನೀಡಿದೆ, ಇದರಂತೆ ಸೊಸೈಟಿ ಫಾರ್ ಕರ್ನಾಟಕ-ಜರ್ಮನ್ ಸಿಲ್ಕ್ ಡೆವೆಲಪ್‌ಮೆಂಟ್ ಸೆಂಡರ್ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ,ಬೆಂಗಳೂರು ಹಾಗೂ ಬೀದರ್, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳಸಂಘ,ಬೆಂಗಳೂರು ಇನ್ನಿತರ ಇಲಾಖೆಗಳಲ್ಲಿ ಕಾನೂನು ಉಲ್ಲಂಘಿಸಿ ನೇಮಕಾತಿ ಆದೇಶ ಮಾಡುತ್ತಿದ್ದು ಕಾರಣ ಸರ್ಕಾರವು ಕೂಡಲೇ ಎಲ್ಲಾ ನೇಮಕಾತಿ ಅಧಿಸೂಚನೆ ಹಾಗೂ ನೇಮಕಾತಿ ಆದೇಶಗಳನ್ನು ಹಿಂದಕ್ಕೆ ಪಡೆದು ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನ ಬದ್ಧ ಮೀಸಲಾತಿಯನ್ನು ನಿಗಧಿಗೊಳಿಸಿ ಮರು ಅಧಿಸೂಚನೆಯನ್ನು ಹೊರಡಿಸಲು ಸೂಕ್ತ ಆದೇಶ ನೀಡಬೇಕು ಅಲ್ಲದೇ ಈ ಕುರಿತು ಜಾಣ ಮೌನ ಪ್ರದರ್ಶಿಸುತ್ತಿರುವ ಹೈ.ಕ.ಜನಪ್ರತಿನಿಧಿಗಳು ಈಗಲಾದರೂ ಎಚ್ಚತ್ತುಕೊಂಡು ಬರುವ ಅಧಿವೇಶನಗಳಲ್ಲಿ ಸರಿಪಡಿಸಬೇಕು ಇಲ್ಲವಾದಲ್ಲಿ ಅವರುಗಳ ನಿವಾಸಗಳ ಎದುರು ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
No comments:
Post a Comment